ಯೋಗರಾಜ್‌ಭಟ್‌ರಿಂದ ‘ಪರಪಂಚ ನಿರ್ಮಾಣ
Posted date: 01 Tue, Apr 2014 – 09:49:34 AM

ನಿರ್ದೇಶಕರಾಗಿ ಖ್ಯಾತರಾಗಿರುವ ಯೋಗರಾಜ್‌ಭಟ್ ಸದಭಿರುಚಿ ಚಿತ್ರಗಳ ನಿರ್ಮಾಪಕರೂ ಹೌದು. ಪ್ರಸ್ತುತ ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ‘ಪರಪಂಚ’  ಎಂಬ ಚಿತ್ರವನ್ನು ಆರಂಭಿಸುತ್ತಿದ್ದಾರೆ. ಡಾ:ರವಿರಾಜ್ ಹಾಗೂ ರುದ್ರಪ್ಪ ಈ ಚಿತ್ರದ ಸಹ ನಿರ್ಮಾಪಕರು.
    ಹಲವು ವರ್ಷಗಳಿಂದ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ‘ಗಾಂಧಿಸ್ಮೈಲ್’  ಚಿತ್ರದ ನಿರ್ದೇಶಕರೂ ಆಗಿರುವ ಕ್ರಿಸ್‌ಜೋಶಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ‘ಪರಪಂಚ’ಕ್ಕೆ ವೆಜ್ ಎಂಡ್ ನಾನ್‌ವೆಜ್ ಎಂಬ ಅಡಿಬರಹವಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
    ಏಪ್ರಿಲ್ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ನಾಲ್ಕು ಹಾಡುಗಳನ್ನು ಯೋಗರಾಜ್‌ಭಟ್ ಹಾಗೂ ಒಂದು ಹಾಡನ್ನು ಜಯಂತಕಾಯ್ಕಿಣಿ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ ‘ಪರಪಂಚ‘ಕ್ಕಿದೆ.
   ದಿಗಂತ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ರಾಗಿಣಿ. ಯೋಗರಾಜ್‌ಭಟ್, ದತ್ತಣ್ಣ,  ಕೆ.ಎಸ್.ಎಲ್.ಸ್ವಾಮಿ, ಅನಂತನಾಗ್, ವಿ.ಮನೋಹರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
‘ಶಂಕ್ರ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed